India
oi-Sunitha B
ದೆಹಲಿ ಜುಲೈ 25: ಭಾರತೀಯ ರೈಲ್ವೆಯ ಇ-ಟಿಕೆಟಿಂಗ್ ಅಂಗವಾದ IRCTC ಮಂಗಳವಾರ ತನ್ನ ವೆಬ್ಸೈಟ್ ಮತ್ತು ಅಪ್ಲಿಕೇಶನ್ನಲ್ಲಿ ತಾಂತ್ರಿಕ ಕಾರಣಗಳಿಂದ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದೆ.
ಜೊತೆಗೆ ಮೇಕ್ಮೈಟ್ರಿಪ್ ಮತ್ತು ಅಮೆಜಾನ್ನಂತಹ ಆನ್ಲೈನ್ ಟ್ರಾವೆಲ್ ಏಜೆನ್ಸಿಗಳ ಮೂಲಕ ಟಿಕೆಟ್ಗಳನ್ನು ಬುಕ್ ಮಾಡಬಹುದು ಎಂದು ಅದು ಹೇಳಿದೆ. IRCTC ವೆಬ್ ಪೋರ್ಟಲ್ ಮತ್ತು ಅಪ್ಲಿಕೇಶನ್ನಲ್ಲಿನ ಸೇವೆಗಳು ಬೆಳಿಗ್ಗೆ 8 ರಿಂದ ಸ್ಥಗಿತಗೊಂಡಿವೆ.
Due to technical reasons, the ticketing service is not available on IRCTC site and App. Technical team of CRIS is resolving the issue.
Alternatively tickets can be booked through other B2C players like Amazon, Makemytrip etc.
— IRCTC (@IRCTCofficial) July 25, 2023

ಆದರೆ ರೈಲ್ವೆ ಟಿಕೆಟಿಂಗ್ ವೆಬ್ಸೈಟ್, IRCTC ಆನ್ಲೈನ್ ಬುಕಿಂಗ್ ಕೆಲವು ಅಡಚಣೆಗಳನ್ನು ಎದುರಿಸುತ್ತಿದೆ. ಪೀಕ್ ಸಮಯದಲ್ಲಿ IRCTC ಸರ್ವರ್ ಡೌನ್ ಆಗಿರುವ ಬಗ್ಗೆ ಜನರು ಟ್ವಿಟರ್ಗೆ ದೂರು ನೀಡಿದ್ದಾರೆ. IRCTC ಗ್ರಾಹಕರು ವೆಬ್ನಲ್ಲಿ ಮತ್ತು ಅಪ್ಲಿಕೇಶನ್ನಲ್ಲಿ ಟಿಕೆಟ್ಗಳನ್ನು ಬುಕ್ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. IRCTC ಹೊರಡಿಸಿದ ಹೇಳಿಕೆಯಲ್ಲಿ, ತಾಂತ್ರಿಕ ಕಾರಣಗಳಿಂದ ಟಿಕೆಟ್ ಸೇವೆ ಲಭ್ಯವಿಲ್ಲ.
“ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸುತ್ತಿದೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ ತಕ್ಷಣ ನಾವು ತಿಳಿಸುತ್ತೇವೆ” ಎಂದು ಹೇಳಿದೆ.
ಆದರೆ ಟಿಕೆಟ್ ಬುಕ್ಕಿಂಗ್ ಆಗದಿದ್ದರೂ ಹಲವಾರು ಜನರು ತಮ್ಮ ಹಣ ಬೆಳಿಗ್ಗೆ 10 ಗಂಟೆಯವರೆಗೆ ಕಡಿತವಾಗಿದೆ ಎಂದು ದೂರಿದ್ದಾರೆ. ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿದ ಜನರಿಗೆ ಭಾರತೀಯ ರೈಲ್ವೆ ಹಣವನ್ನು ಹಿಂದಿರುಗಿಸುತ್ತದೆಯೇ ಎಂಬುದರ ಕುರಿತು ಯಾವುದೇ ಮಾತುಗಳಿಲ್ಲ.
English summary
Train ticket booking service IRCTC shut down, it says can book on Amazon, MakeMyTrip.
Story first published: Tuesday, July 25, 2023, 12:24 [IST]